ಕಾಣದ ಊರಿಗೆ ಕೂಲಿಗೆ ಹೊರಟೋಳೆ
ಕಣ್ತುಂಬ ಕನಸುಗಳ ತೇರನ್ನೆ ಹೊತ್ತೋಳೆ
ಕಾಣದ ಊರಿಗೆ ಕೂಲಿಗೆ ಹೊರಟೋಳೆ
ಕಣ್ತುಂಬ ಕನಸುಗಳ ತೇರನ್ನೆ ಹೊತ್ತೋಳೆ
ಕಣ್ಣೀರು ಯಾಕವ್ವ ಕಣ್ಣಾಗ
ಕಡುದುಃಖವು ಯಾಕವ್ವ ಮನದಾಗ
ತಬ್ಬಲಿ ಅಜ್ಜಯ್ಯ ಹಾಡೀಲಿ ಉಳಿದೈತೆ
ಹಸಿರೆಲೆ ಹಾಸಿಕೊಂಡು ಹಸಿದು ಹಸಿದು ಮಲಗೈತೆ
ಅಳುವ ನನ್ನಜ್ಜಯ್ಯನ ನೆನೆ ನೆನೆದು
ನನ್ನ ಕರುಳಾಗ ಕಾಡ್ಗಿಚ್ಚೆ ತುಂಬೈತೆ
ಕಲ್ಲಂತ ಭೂಮೀಯ ಬರಿಗೈಲಿ ಬಗೆದೋಳೆ
ಗೇಣುದ್ದ ಗೆಣಸಿಗೆ ಕಾಡುದ್ದ ಅಲೆದೋಳೆ
ಕನಸಿಲ್ಲ ಯಾಕವ್ವ ಕಣ್ಣಾಗ ನಿನ್ನ
ಬಲವಿಲ್ಲ ಯಾಕವ್ವ ರಟ್ಯಾಗ
ಜೇನಿಗೋದ ಅಪ್ಪ ಆನೆಗೆ ಬಲಿಯಾದ
ಗಂಜಿಗು ಬರವಾಗಿ ಸತ್ತಾಯ್ತು ಒಡಹುಟ್ಟು
ಇನ್ನೆಲ್ಲಿ ಕನಸಣ್ಣ ಕಣ್ಣಾಗ ನನಗ
ಇನ್ನಾವ ಸುಖವಣ್ಣ ಬದುಕ್ಕಾಗ
ಕಾಣದ ಊರಲ್ಲಿ ಶೋಕ ಮಾಡೊ ತಂಗಿ
ಸೀಗೆಯ ಮಳೆಯಲ್ಲಿ ಚಿಂತೆ ಮಾಡೊ ತಂಗಿ
ಕಾಣದ ಊರಲ್ಲಿ ಶೋಕ ಮಾಡೊ ತಂಗಿ
ಸೀಗೆಯ ಮಳೆಯಲ್ಲಿ ಚಿಂತೆ ಮಾಡೊ ತಂಗಿ
ಕಣ್ಣೀರ ತೊಡೆಯವ್ವ ಕನಸ್ಸೊಂದ ಕಾಣವ್ವ
ನೀನೆ ಈ ಮಣ್ಣಿನ ಮಗಳವ್ವ
ನಾಡೆ ನಿನ ತವರೆಂದು ತಿಳಿಯವ್ವ
ಈ ನಾಡೆ ನಿನ ತವರೆಂದು ತಿಳಿಯವ್ವ
ಕಾಣದ ಊರಿಗೆ ಕೂಲಿಗೆ ಹೊರಟೋಳೆ
ಕಣ್ತುಂಬ ಕನಸುಗಳ ತೇರನ್ನೆ ಹೊತ್ತೋಳೆ
ಕಾಣದ ಊರಿಗೆ ಕೂಲಿಗೆ ಹೊರಟೋಳೆ
ಕಣ್ತುಂಬ ಕನಸುಗಳ ತೇರನ್ನೆ ಹೊತ್ತೋಳೆ
ಕಣ್ಣೀರು ಯಾಕವ್ವ ಕಣ್ಣಾಗ
ಕಡುದುಃಖವು ಯಾಕವ್ವ ಮನದಾಗ
ತಬ್ಬಲಿ ಅಜ್ಜಯ್ಯ ಹಾಡೀಲಿ ಉಳಿದೈತೆ
ಹಸಿರೆಲೆ ಹಾಸಿಕೊಂಡು ಹಸಿದು ಹಸಿದು ಮಲಗೈತೆ
ಅಳುವ ನನ್ನಜ್ಜಯ್ಯನ ನೆನೆ ನೆನೆದು
ನನ್ನ ಕರುಳಾಗ ಕಾಡ್ಗಿಚ್ಚೆ ತುಂಬೈತೆ
ಕಲ್ಲಂತ ಭೂಮೀಯ ಬರಿಗೈಲಿ ಬಗೆದೋಳೆ
ಗೇಣುದ್ದ ಗೆಣಸಿಗೆ ಕಾಡುದ್ದ ಅಲೆದೋಳೆ
ಕನಸಿಲ್ಲ ಯಾಕವ್ವ ಕಣ್ಣಾಗ ನಿನ್ನ
ಬಲವಿಲ್ಲ ಯಾಕವ್ವ ರಟ್ಯಾಗ
ಜೇನಿಗೋದ ಅಪ್ಪ ಆನೆಗೆ ಬಲಿಯಾದ
ಗಂಜಿಗು ಬರವಾಗಿ ಸತ್ತಾಯ್ತು ಒಡಹುಟ್ಟು
ಇನ್ನೆಲ್ಲಿ ಕನಸಣ್ಣ ಕಣ್ಣಾಗ ನನಗ
ಇನ್ನಾವ ಸುಖವಣ್ಣ ಬದುಕ್ಕಾಗ
ಕಾಣದ ಊರಲ್ಲಿ ಶೋಕ ಮಾಡೊ ತಂಗಿ
ಸೀಗೆಯ ಮಳೆಯಲ್ಲಿ ಚಿಂತೆ ಮಾಡೊ ತಂಗಿ
ಕಾಣದ ಊರಲ್ಲಿ ಶೋಕ ಮಾಡೊ ತಂಗಿ
ಸೀಗೆಯ ಮಳೆಯಲ್ಲಿ ಚಿಂತೆ ಮಾಡೊ ತಂಗಿ
ಕಣ್ಣೀರ ತೊಡೆಯವ್ವ ಕನಸ್ಸೊಂದ ಕಾಣವ್ವ
ನೀನೆ ಈ ಮಣ್ಣಿನ ಮಗಳವ್ವ
ನಾಡೆ ನಿನ ತವರೆಂದು ತಿಳಿಯವ್ವ
ಈ ನಾಡೆ ನಿನ ತವರೆಂದು ತಿಳಿಯವ್ವ
Kaanada Oorige song lyrics from Kannada Movie Kanneri starring Archana Madhusudhan, Arun Sagar, Anitha Bhat, Lyrics penned by Kotiganahalli Ramaiah Sung by Keerthan Holla, Indu Nagaraj, Manikanth Kadri, Music Composed by Kadri Manikanth, film is Directed by Ninasam Manju and film is released on 2022