Mutthinantha Maathu Chanda Lyrics

in Jaidev

LYRIC

ಒಹೋ.. ಒಹೋ..
ಒಹೋ.. ಒಹೋ.. ಒಹೋ..

ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ
ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ

ಮುತ್ತಿನಂಥ ಮಾತು ಇದು
ಚಿನ್ನದಂತ ಭಾಷೆ ಇದು
ಕನ್ನಡ.... ಕನ್ನಡ.....
ಅಕ್ಕರೆಯ ಉಕ್ಕಿಸುವ
ಸಕ್ಕರೆಯ ಮಾತು ಇದು
ಕನ್ನಡ.... ಕನ್ನಡ....
ಗಂಧದಂತೆ ಚಂದವಿದು
ಹೂವಿಗಿಂತ ಅಂದವಿದು
ನಮ್ಮ.... ಕನ್ನಡ....
ಹತ್ತು ಮಾತಿಗಿಂತ ಮೇಲು
ಹೆತ್ತ ತಾಯಿ ಪ್ರೀತಿಯಿಂದ
ಹೇಳಿ ಕೊಟ್ಟ ಭಾಷೆ ಕನ್ನಡ

ಮುದ್ದು ಮುದ್ದು ಮಾತು ಕನ್ನಡ 
ಮುದ್ದು ಮುದ್ದು ಮಾತು ಕನ್ನಡ
 
|| ಮುತ್ತಿನಂಥ ಮಾತು ಇದು
ಚಿನ್ನದಂತ ಭಾಷೆ ಇದು
ಕನ್ನಡ.... ಕನ್ನಡ.....
ಅಕ್ಕರೆಯ ಉಕ್ಕಿಸುವ
ಸಕ್ಕರೆಯ ಮಾತು ಇದು
ಕನ್ನಡ.... ಕನ್ನಡ....||
 
ಓಯ್‌ ಓಯ್‌ ಓಯೋ ಓಯ್
ಓಯ್‌ ಓಯ್‌ ಓಯೋ ಓಯ್
 
ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ
ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ
 
ನಾವು ನಮ್ಮ ನುಡಿ ಪ್ರೀತಿಸುವವರು
ಬೇರೆ ಭಾಷೆಗಳು ಕೀಳಲ್ಲಾ 
ನಮ್ಮ ನಾಡಿನಲ್ಲಿ ಇರುವವರೆಲ್ಲರು
ಕನ್ನಡ ಕಲಿವುದು ತಪ್ಪಲ್ಲಾ 
ಕರ್ನಾಟಕದಲಿ ಕನ್ನಡವೊಂದೇ
ಕರ್ನಾಟಕದಲಿ ಕನ್ನಡವೊಂದೆ
ದಿನ ದಿನ ನಲಿಯಲಿ ಜನರಲ್ಲಿ 
ಉತ್ತರ ದಕ್ಷಿಣ ಪೂರ್ವ ಪಶ್ಚಿಮ
ಕನ್ನಡ ತಾಯಿಯ ಲಾಲಿ 
ಕನ್ನಡ ಪ್ರೀತಿ ತನು ಮನದಲ್ಲಿ
ತುಂಬಿಕೋ ಕನ್ನಡಿಗ
ಕನ್ನಡ ನಮ್ಮ ದೇವರು ಎಂದು
ನಂಬಿಕೋ ಕನ್ನಡಿಗ 
 
|| ಮುತ್ತಿನಂಥ ಮಾತು ಇದು
ಚಿನ್ನದಂತ ಭಾಷೆ ಇದು
ಕನ್ನಡ.... ಕನ್ನಡ.....
ಅಕ್ಕರೆಯ ಉಕ್ಕಿಸುವ
ಸಕ್ಕರೆಯ ಮಾತು ಇದು
ಕನ್ನಡ.... ಕನ್ನಡ....||
 
ಓಯ್‌ ಓಯ್..ಓಯ್‌ ಓಯ್
 
ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ
ಮಾತು ಕನ್ನಡ ನೀತಿ ಕನ್ನಡ
ಪ್ರೀತಿ ಸ್ನೇಹವೂ ಕನ್ನಡ
 
ಕಾಡು ಮೇಡುಗಳ ಸೊಬಗುಂಟು
ಕಡಲ ತೀರಗಳ ಚೆಲುವುಂಟು 
ನಿಸರ್ಗ ದೇವಿ ಇಲ್ಲೆ ನಲಿಯುತಿರುವಳು 
ನೃತ್ಯ ಗೀತೆಗಳ ಸಿರಿಯುಂಟು
ಧರ್ಮ ತತ್ವಗಳ ಬೆಳಕುಂಟು 
ನೂರು ದೇವರಿಲ್ಲಿ ಹರುಸುತಿರುವುರು 
ಕವಿಗಳ  ನಾಡು ಕಲೆಗಳ ಬೀಡು
ಕವಿಗಳ  ನಾಡು ಕಲೆಗಳ ಬೀಡು
ಹಿರಿಮೆಯ ಗಳಿಸಿದ ಸಿರಿನಾಡು 
ಅಭಿಮಾನದಲಿ ಆಳಿದ ದೊರೆಗಳ
ಸುಂದರ ಕನ್ನಡ ನಾಡು 
ಕನ್ನಡ ಪ್ರೀತಿ ತನು ಮನದಲ್ಲಿ
ತುಂಬಿಕೋ ಕನ್ನಡಿಗ 
ಕನ್ನಡ ನಮ್ಮ ದೇವರು ಎಂದು
ನಂಬಿಕೋ ಕನ್ನಡಿಗ...
 
|| ಮುತ್ತಿನಂಥ ಮಾತು ಇದು
ಚಿನ್ನದಂತ ಭಾಷೆ ಇದು
ಕನ್ನಡ.... ಕನ್ನಡ.....
ಅಕ್ಕರೆಯ ಉಕ್ಕಿಸುವ
ಸಕ್ಕರೆಯ ಮಾತು ಇದು
ಕನ್ನಡ.... ಕನ್ನಡ....
ಗಂಧದಂತೆ ಚಂದವಿದು
ಹೂವಿಗಿಂತ ಅಂದವಿದು
ನಮ್ಮ.... ಕನ್ನಡ....
ಹತ್ತು ಮಾತಿಗಿಂತ ಮೇಲು
ಹೆತ್ತ ತಾಯಿ ಪ್ರೀತಿಯಿಂದ
ಹೇಳಿ ಕೊಟ್ಟ ಭಾಷೆ ಕನ್ನಡ....||

ಮುದ್ದು ಮುದ್ದು ಮಾತು ಕನ್ನಡ 
ಮುದ್ದು ಮುದ್ದು ಮಾತು ಕನ್ನಡ

Mutthinantha Maathu Chanda song lyrics from Kannada Movie Jaidev starring Jaggesh, Charulatha, Ashok, Lyrics penned by Su Rudramurthy Shastry Sung by L N Shastry, Chorus, Music Composed by Rajesh Ramanath, film is Directed by H Vasu and film is released on 1998