Enidu Sojiga Lyrics

in Jaggi Jagannatha

LYRIC

-
ಯೂ ಮೈ ಲವ್
ಯೂ ಮೈ ಲವ್
ಯೂ ಮೈ ಲವ್
ಫೀಲ್ ಮೈ ಲವ್
 
ಏನಿದು ಸೋಜಿಗ ಬೇಗನೆ ಬೆಳಗಾಯಿತು
ನಿನ್ನಯ ಸೆಳೆತಕೆ ಅಲ್ಲವೂ ಬದಲಾಯಿತು
 
ಬೀಸೊ ಗಾಳಿಗು ಭಾಸವಾಗಿದೆ ಜೀವ ಜೀವಗಳ ಚಕ್ಕಂದ
ಭಾವಲೋಕದ ರಾಯಭಾರಿಯೆ ಬೇಗ ಮಾಡಿಬಿಡು ಒಪ್ಪಂದ
 
||ಏನಿದು ಸೋಜಿಗ ಬೇಗನೆ ಬೆಳಗಾಯಿತು
ನಿನ್ನಯ ಸೆಳೆತಕೆ ಅಲ್ಲವೂ ಬದಲಾಯಿತು||
 
ಹೇಗೆ ಸರಿಯಾಗಿ ಹೇಳುವುದು ಪ್ರೇಮವನು
ನಿನ್ನ ನಿಲುವಲ್ಲೆ ಕಂಡೆ ನಾ ದೇವರನು
ಒಂಟಿ ಬಾಳಿಗೀಗ ನನ್ನ ರಾಜಿನಾಮೆ ನೀ ಕೊಡಿಸು
ಸುತ್ತಮುತ್ತ ನೋಡದೇನೆ ತುಫಾನ್‌ ಅಂತೆ ಆವರಿಸು
 
||ಏನಿದು ಸೋಜಿಗ ಬೇಗನೆ ಬೆಳಗಾಯಿತು
ನಿನ್ನಯ ಸೆಳೆತಕೆ ಅಲ್ಲವೂ ಬದಲಾಯಿತು||
 
ನೀನು ನಗುವಾಗ ಮೂಡುವುದು ಹೂ ಬಿಸಿಲು
ಮಾಯಾ ಮಳೆಯಂತೆ ನೀನು ಮರುಭೂಮಿಯಲು
ಎಲ್ಲಿ ಅಂದರಲ್ಲಿ ನಿನ್ನ ಧ್ಯಾನದಲ್ಲಿ ಮೈಮರೆತು
ದಿವ್ಯವಾಯ್ತು ದಾರಿ ನನ್ನ ಯಾನದಲ್ಲಿ ನೀ ಬೆರೆತು
 

Enidu Sojiga song lyrics from Kannada Movie Jaggi Jagannatha starring Likhith Raj, Duniya Rashmi, Saikumar, Lyrics penned by Jayanth Kaikini Sung by Rahul Nambiar, Sharanya, Music Composed by A M Neel, film is Directed by Om Saiprakash and film is released on 2020
Lyricist:

Jayanth Kaikini

Director:

Om Saiprakash

Music Director:

A M Neel