-
ಚಿನ್ನದ ನಾಡ ಗಂಧದ ನಾಡ ವೈಭವ ಗೀತೆಯಿದು
ರಾಜ ಮಹೋದಯರಾಳಿದ ಸುಂದರಗಾಥೆಯಿದು
ಸುವರ್ಣ ಸಾಮ್ರಾಜ್ಯ ನಮ್ಮೆಲ್ಲರ ಸೌಭಾಗ್ಯ
ನಿಸರ್ಗ ಸೌಂದರ್ಯ ಅಪೂರ್ವ ಸೌಭಾಗ್ಯ
ಚಿನ್ನದ ನಾಡ ಗಂಧದ ನಾಡ ವೈಭವ ಗೀತೆಯಿದು
ರಾಜ ಮಹೋದಯರಾಳಿದ ಸುಂದರಗಾಥೆಯಿದು
ಕನ್ನಡ ಕೀರ್ತಿ ಪತಾಕೆಯ ಎತ್ತರ ಹಾರಿಸಿದರಸರ ಇತಿಹಾಸ
ಬೇಲೂರ್ ಹಳೆಬೀಡು ಅಖಂಡ ಶಿಲೆಯಲ್ಲಿ ಮೂಡಿತು ಸುಂದರ ವಿನ್ಯಾಸ
ಮುತ್ತುರತ್ನಗಳು ರಸ್ತೆಗಳಿಕ್ಕೆಲ್ಲ ಮಾರುವ ಸುವರ್ಣ ಯುಗ ಅಂದು
ಕೃಷ್ನದೇವರಾಯ ಆಳಿದ ಧರಣಿ ಮೇಲಿನ ಸ್ವರ್ಗ ಅದು
ಒನಕೆಯ ಓಬವ್ವ ಸಂಚಿಯ ಹೊನ್ನಮ್ಮ ಕೆಳದಿ ಚೆನ್ನಮ್ಮ
ಬೆಳವಡಿ ಮಲ್ಲಮ್ಮ ಸ್ತ್ರೀ ಸ್ವಾತಂತ್ರ್ಯದ ಮೆರೆಸಿದ ಮಣ್ಣಲಿ
ಜನಿಸಿದ ಅಕ್ಕಮಹಾದೇವಿ
ಸ್ವಾತಂತ್ರ್ಯ ಸಮರದ ಸಿಂಹಿಣಿ ಕಿತ್ತೂರು ಚೆನ್ನಮ್ಮರ ಕತೆ ಚಿರಸ್ಥಾಯಿ
ಮಧ್ವಚಾರ್ಯರು ಕನಕ ಪುರಂದರ ದಾಸರ ಪದಗಳ ತತ್ವಗಳು
ಲೋಕ ಲೋಕದ ಸತ್ವಗಳು
ಲೋಕದ ಡೊಂಕನು ತೋರಿದ ಕವಿಸಿರಿ ಸರ್ವಜ್ಞರ ಹಿತವಚನಗಳು
ಬಸವಣ್ಣರ ಕೃತಿರತ್ನಗಳು
ಲೋಕಪೂಜಿತ ರಾಘವೇಂದ್ರಗುರು ಸರ್ವಭೌಮರನಾಡಿದುವೆ
||ಚಿನ್ನದ ನಾಡ ಗಂಧದ ನಾಡ ವೈಭವ ಗೀತೆಯಿದು
ರಾಜ ಮಹೋದಯರಾಳಿದ ಸುಂದರಗಾಥೆಯಿದು||
ಇಂತಹ ನಾಡಿಗೆ ಸೋಂಕು ತಗುಲಿತು ರಾಜಕೀಯದ ವಿಷಕ್ರಿಮಿಯು
ಔಷಧಿ ಹೊಡೆದರು ಸಾಯದೆ ಬೆಳೆಯಿತು ನಾಡನು ಕಬಳಿಸೊ ಹುಳ ತಳಿಯು
ದೋಚಲು ಸಿಕ್ಕಿತು ಲೈಸೆನ್ಸು ಆದರು ಪ್ರಜೆಗಳು ಸೈಲೆನ್ಸು
ಮೆಡಿಕಲ್ ಇಂಜಿನಿಯರ್ ಲಾಭದಾದಿಗಳು
ಕೊಳ್ಳೆಯ ಹೊಡೆಯಲು ಕಲಿಸಿದವು
ಸತ್ಯವ ಸುಳ್ಳು ಸುಳ್ಳನು ಸತ್ಯ ನ್ಯಾಯವ ತಿರುಚುವ ಲಾಯರ್ಸು
ವಿಷಕಲಬೆರಕೆ ಔಷಧಿ ಕೊಟ್ಟರು ಯಮನ ಬ್ರದರ್ಸು ಡಾಕ್ಟರ್ಸು
ಯಾರನು ಯಾರೊ ಮೋಸವ ಮಾಡಿ ದೋಚುವುದೆಂದೆ ತಿಳಿದಿಲ್ಲಿ
ನಮ್ಮನ್ನು ನಾವೆ ವಂಚಿಸಿ ದೋಚುತ ಮರೆತೆವು ಕರ್ತವ್ಯ ಬದುಕಲ್ಲಿ
ಬಂದ ನರೇಂದ್ರ ಮಾಯಾ ಭಜೇಂದ್ರ
ಲಂಚವು ನಿಂತಿತು ಕಲಬೆರಕೆ ನಿಂತಿತು
ನಿಂತಿತು ಜೀತದ ನರಳುವಿಕೆ
ರಸ್ತೆಲಿ ನೋಟು ಚಿನ್ನದ ಒಡವೆ
ಬಿದ್ದರು ಇಲ್ಲದರ ಬಯಕೆ
ಜನ ಸುಳ್ಳು ಹೇಳೋದನ್ನ ಬಿಟ್ರು ಲಂಚ ಮುಟ್ಟೋದನ್ನ ಬಿಟ್ರು
ಲಾಕಪ್ ಡೆತ್ ಆಗಲೆ ಇಲ್ಲ ರೇಪ್ ಗೀಪ್ ನಡಿಲಿಲ್ಲ
ಮರ್ಡರ್ ಗಿರ್ಡರ್ ಮಾಡೋರಿಲ್ಲ
ಕುಡ್ಯೋದ್ ಜನ ಬಿಟ್ಟೆ ಬಿಟ್ರು ವೇಶ್ಯೆಯರೆಲ್ಲ ಗರತಿಯರಾದ್ರು
ನರೇಂದ್ರ ಜಾಲ ಇದು ಮಹೇಂದ್ರ ಜಾಲ
ನರೇಂದ್ರ ಜಾಲ ಇದು ಮಹೇಂದ್ರ ಜಾಲ
|| ಚಿನ್ನದ ನಾಡ ಗಂಧದ ನಾಡ ವೈಭವ ಗೀತೆಯಿದು
ರಾಜ ಮಹೋದಯರಾಳಿದ ಸುಂದರಗಾಥೆಯಿದು
ಸುವರ್ಣ ಸಾಮ್ರಾಜ್ಯ ನಮ್ಮೆಲ್ಲರ ಸೌಭಾಗ್ಯ
ನಿಸರ್ಗ ಸೌಂದರ್ಯ ಅಪೂರ್ವ ಸೌಭಾಗ್ಯ||