ಕರಡಿಮರಿಯೆ ನೀನು ಏನು ಮಾಡುತಿರುವೆ
ಕೋತಿಮರಿಯೆ ನಾನು ಜೇನು ಕುಡಿಯುತಿರುವೆ
ಕೋತಿಮರಿಯೆ ನೀನು ಏನು ಮಾಡುತಿರುವೆ
ಹಲಸಿನಹಣ್ಣು ನಾನು ತಿನ್ನುತಲಿರುವೆ
ನಿನ್ನ ಜೇನು ಹೇಗಿದೆ ಹೇಳು
ಸವಿಯಾಗಿರುಹುದು ನನ್ನಯ ಜೇನು
ಹೇಗಿದೆ ಹಲಸು ಹೇಳು ನೀನು
ನನ್ನಯ ಹಲಸು ರುಚಿಯಾಗಿಹುದು
ನಿನಗು ಬೇಕೆನ ಕೊಡಲುಬಹುದು
ಹಲಸಿನಹಣ್ಣು ಕೊಟ್ಟರೆ ನೀ ಕೊಡುವೆ ಜೇನು
(ಕೋತಿಮರಿಯು ಕರಡಿಮರಿಯು ಹಲಸು ಜೇನು ಹಂಚಿಕೊಂಡು
ಒಂದಕ್ಕೊಂದು ಕಲಿಸಿಕೊಂಡು ತಿಂದು ನಲಿದವು)
ಅಮ್ಮ ಕರಡಿ ಅಮ್ಮ ಕೋತಿ ಅಲ್ಲಿ ಬಂದವು
ತಮ್ಮ ಮರಿಯ ಖುಷಿಯ ವಿಷಯ ಕೇಳಿ ತಿಳಿದವು
ಇನ್ನು ಮುಂದೆ ಜೇನು ಹಲಸು ನಾವು ತರುವೆವು
ಹೀಗೆ ಹಂಚಿಕೊಂಡು ನೀವು ತಿನ್ನಿ ಎಂದವು
ಹಲಸು ತರುವುದೆ ಕಷ್ಟ ಕೋತಿ ಹೇಳಿತು
ಜೇನು ತರುವುದೆ ಕಷ್ಟ ಕರಡಿ ಹೇಳಿತು
ತಮ್ಮ ಶ್ರಮವೆ ದೊಡ್ಡದೆಂದು ವಾದ ಮಾಡಿತು
ಕೋತಿ ಕರಡಿ ಜಗಳವಾಡಿ ದೂರವಾಯಿತು
ಹಲಸು ಇರದೆ ಕರಡಿಮರಿಯು ಜೇನು ಮುಟ್ಟದೆ
ಜೇನು ಇರದೆ ಕೋತಿಮರಿಯು ಹಲಸು ಮುಟ್ಟದೆ
ತನ್ನ ತಾಯಿ ಕೊಟ್ಟದೊಂದ ಮರಿಯು ತಿನ್ನದೆ
ಹಸಿದು ಹಸಿದು ಮರಿಗಳೆರಡು ಸೋತು ಸೊರಗಿತು
ಸಾಯೊ ಮರಿಯ ಕಂಡು ಅಲ್ಲಿ ಗರುಡ ಬಂದಿತು
ತಾಯಿ ಕರಡಿ ತಾಯಿ ಕೋತಿ ಹೋಗೆಂದಿತು
ಹೋಗಲಾರೆ ಸತ್ತಮರಿಯ ನಾನು ತಿನ್ನುವೆ
ಮರಿಯ ಸಾವಿಗೆ ಹೊಣೆಯು ನಿಮ್ಮ ಸ್ವಾರ್ಥವೆ
ಹೋಗಲಾರೆ ಸತ್ತಮರಿಯ ನಾನು ತಿನ್ನುವೆ
ಮರಿಯ ಸಾವಿಗೆ ಹೊಣೆಯು ನಿಮ್ಮ ಸ್ವಾರ್ಥವೆ
ತಾಯಿ ಕೋತಿ ತಾಯಿ ಕರಡಿಗರಿವು ಬಂದಿತು
ಹಲಸು ಜೇನು ಕಲಿಸಿಕೊಟ್ಟು ಮರಿಯ ಉಳಿಸಿತು
ನಂದೆ ಎಲ್ಲ ನಾನೆ ಹೆಚ್ಚು ಎಂಬೊ ಗರ್ವ ಅಳಿಯಿತು
ಎಲ್ಲ ದೇವರಿತ್ತ ಕೊಡುಗೆ ಹಂಚಿ ಬಾಳಿ ಎಂದಿತು
ಕರಡಿಮರಿಯೆ ನೀನು ಏನು ಮಾಡುತಿರುವೆ
ಕೋತಿಮರಿಯೆ ನಾನು ಜೇನು ಕುಡಿಯುತಿರುವೆ
ಕೋತಿಮರಿಯೆ ನೀನು ಏನು ಮಾಡುತಿರುವೆ
ಹಲಸಿನಹಣ್ಣು ನಾನು ತಿನ್ನುತಲಿರುವೆ
ನಿನ್ನ ಜೇನು ಹೇಗಿದೆ ಹೇಳು
ಸವಿಯಾಗಿರುಹುದು ನನ್ನಯ ಜೇನು
ಹೇಗಿದೆ ಹಲಸು ಹೇಳು ನೀನು
ನನ್ನಯ ಹಲಸು ರುಚಿಯಾಗಿಹುದು
ನಿನಗು ಬೇಕೆನ ಕೊಡಲುಬಹುದು
ಹಲಸಿನಹಣ್ಣು ಕೊಟ್ಟರೆ ನೀ ಕೊಡುವೆ ಜೇನು
(ಕೋತಿಮರಿಯು ಕರಡಿಮರಿಯು ಹಲಸು ಜೇನು ಹಂಚಿಕೊಂಡು
ಒಂದಕ್ಕೊಂದು ಕಲಿಸಿಕೊಂಡು ತಿಂದು ನಲಿದವು)
ಅಮ್ಮ ಕರಡಿ ಅಮ್ಮ ಕೋತಿ ಅಲ್ಲಿ ಬಂದವು
ತಮ್ಮ ಮರಿಯ ಖುಷಿಯ ವಿಷಯ ಕೇಳಿ ತಿಳಿದವು
ಇನ್ನು ಮುಂದೆ ಜೇನು ಹಲಸು ನಾವು ತರುವೆವು
ಹೀಗೆ ಹಂಚಿಕೊಂಡು ನೀವು ತಿನ್ನಿ ಎಂದವು
ಹಲಸು ತರುವುದೆ ಕಷ್ಟ ಕೋತಿ ಹೇಳಿತು
ಜೇನು ತರುವುದೆ ಕಷ್ಟ ಕರಡಿ ಹೇಳಿತು
ತಮ್ಮ ಶ್ರಮವೆ ದೊಡ್ಡದೆಂದು ವಾದ ಮಾಡಿತು
ಕೋತಿ ಕರಡಿ ಜಗಳವಾಡಿ ದೂರವಾಯಿತು
ಹಲಸು ಇರದೆ ಕರಡಿಮರಿಯು ಜೇನು ಮುಟ್ಟದೆ
ಜೇನು ಇರದೆ ಕೋತಿಮರಿಯು ಹಲಸು ಮುಟ್ಟದೆ
ತನ್ನ ತಾಯಿ ಕೊಟ್ಟದೊಂದ ಮರಿಯು ತಿನ್ನದೆ
ಹಸಿದು ಹಸಿದು ಮರಿಗಳೆರಡು ಸೋತು ಸೊರಗಿತು
ಸಾಯೊ ಮರಿಯ ಕಂಡು ಅಲ್ಲಿ ಗರುಡ ಬಂದಿತು
ತಾಯಿ ಕರಡಿ ತಾಯಿ ಕೋತಿ ಹೋಗೆಂದಿತು
ಹೋಗಲಾರೆ ಸತ್ತಮರಿಯ ನಾನು ತಿನ್ನುವೆ
ಮರಿಯ ಸಾವಿಗೆ ಹೊಣೆಯು ನಿಮ್ಮ ಸ್ವಾರ್ಥವೆ
ಹೋಗಲಾರೆ ಸತ್ತಮರಿಯ ನಾನು ತಿನ್ನುವೆ
ಮರಿಯ ಸಾವಿಗೆ ಹೊಣೆಯು ನಿಮ್ಮ ಸ್ವಾರ್ಥವೆ
ತಾಯಿ ಕೋತಿ ತಾಯಿ ಕರಡಿಗರಿವು ಬಂದಿತು
ಹಲಸು ಜೇನು ಕಲಿಸಿಕೊಟ್ಟು ಮರಿಯ ಉಳಿಸಿತು
ನಂದೆ ಎಲ್ಲ ನಾನೆ ಹೆಚ್ಚು ಎಂಬೊ ಗರ್ವ ಅಳಿಯಿತು
ಎಲ್ಲ ದೇವರಿತ್ತ ಕೊಡುಗೆ ಹಂಚಿ ಬಾಳಿ ಎಂದಿತು
Karadimariye song lyrics from Kannada Movie Hoovu Balli starring Harish Raj, Tara, Ramesh Bhat, Lyrics penned by J M Prahlad Sung by Shalini Lohith, Gautham Srivatsa, Dimple. M, Music Composed by Gautham Srivatsa, film is Directed by B.Manjunath and film is released on 2018