Ee Loka Bari Shoka Lyrics

in Hero Nanalla

Video:

LYRIC

ಈ ಲೋಕ ಬರಿ ಶೋಕ
ನಾ ಯಾರ ನಂಬಲಿ ನಾ ಹೇಗೆ ನಂಬಲಿ
ಈ ಲೋಕ ಬರಿ ಶೋಕ
ನಾ ಯಾರ ನಂಬಲಿ ನಾ ಹೇಗೆ ನಂಬಲಿ
ಲೋಕ ಬರಿ ಶೋಕ
ನಾ ಯಾರ ನಂಬಲಿ ನಾ ಹೇಗೆ ನಂಬಲಿ
 
ಜನ್ಮಕೊಟ್ಟಮ್ಮ ಬೇಡುತಿರೆ ಸುಖವು ಇನ್ನೆಲ್ಲಿದೆ
ಜನ್ಮಕೊಟ್ಟಮ್ಮ ಬೇಡುತಿರೆ ಸುಖವು ಇನ್ನೆಲ್ಲಿದೆ
ನಿಂತ ನೆಲವೇನೆ ಬಾಯ್ತೆರೆಯೆ ನೆಲೆಯು ಇನ್ನೆಲ್ಲಿದೆ
ಹಾಲುಕೊಟ್ಟಮ್ಮ ವಿಷವು ಬಾಳು ಕಣ್ಣಿರೆ
ತಂಪು ಚಂದ್ರಮ ಕೆಂಡವ ಸುರಿಯೆ ಕಷ್ಟ ಕೋಟಲೆ
ಬದುಕ ನಿಗೂಢ ಕೂಡ ಅರಿತವರಾರೊ ಏನಿ ಅನುಬಂಧವೋ
 
||ಈ ಲೋಕ ಬರಿ ಶೋಕ
ನಾ ಯಾರ ನಂಬಲಿ ನಾ ಹೇಗೆ ನಂಬಲಿ||
 
ಜೊತೆಗೆ ಒಡಹುಟ್ಟಿದ ತಂಗ್ಯಮ್ಮ ನಿನ್ನ ನೆನಪಾಗಲು
ಜೊತೆಗೆ ಒಡಹುಟ್ಟಿದ ತಂಗ್ಯಮ್ಮ ನಿನ್ನ ನೆನಪಾಗಲು
ಮೋಡ ಸರಿದಂತೆನೆ ನೇಸರನು ಎಂದು ಹೊಳಪಾಗಲು
ಅಣ್ಣ ಅಂದಾಗ ಅವಳ ವಾತ್ಸಲ್ಯ ಅಕ್ಕರೆ
ಅಪ್ಪಿ ಮುದ್ದಾಡೊ ಬಾಲ್ಯ ಹಾಲ್ಜೇನು ಸಕ್ಕರೆ
ಬದುಕ ನಿಗೂಢ ಕೂಡ ಅರಿತವರಾರೊ ಏನಿ ಅನುಬಂಧವೋ
 
||ಈ ಲೋಕ ಬರಿ ಶೋಕ
ನಾ ಯಾರ ನಂಬಲಿ ನಾ ಹೇಗೆ ನಂಬಲಿ||
 
ಕರುಳ ಸಂಬಂಧ ಇಲ್ಲದೋರು ಬಾಳು ಕಾಪಾಡಲು
ಆ ಕರುಳ ಸಂಬಂಧ ಇಲ್ಲದೋರು ಬಾಳು ಕಾಪಾಡಲು
ಕಾಣದ ಕೈಯಯಿಂದ ಎಲ್ಲೊ ಏನೊ ಕೊನೆಯಾಗಲು
ಯಾರ ಬಾಳಿಗೆ ಹೊಣೆಯ ಹೊತ್ತರು
ಮಣ್ಣಿನ ಋಣಕೆ ಯಾರು ಬೆಲೆಯ ಕೊಟ್ಟಾರು
ಬದುಕ ನಿಗೂಢ ಕೂಡ ಅರಿತವರಾರೊ ಏನಿ ಅನುಬಂಧವೋ
ಈ ಜನುಮ ಬಲು ಮರ್ಮ
ಇಲ್ಲಿ ಸಾವು ನಿಶ್ಚಿತ ಯಾರಿಲ್ಲ ಶಾಶ್ವತ
ಈ ಜನುಮ ಬಲು ಮರ್ಮ
ಇಲ್ಲಿ ಸಾವು ನಿಶ್ಚಿತ ಯಾರಿಲ್ಲ ಶಾಶ್ವತ
ಈ ಜನುಮ ಬಲು ಮರ್ಮ
ಇಲ್ಲಿ ಸಾವು ನಿಶ್ಚಿತ ಯಾರಿಲ್ಲ ಶಾಶ್ವತ
 

Ee Loka Bari Shoka song lyrics from Kannada Movie Hero Nanalla starring Pavan, Sahana, Jai Jagadish, Lyrics penned by Doddarange Gowda Sung by Mohammed Aslam, Music Composed by Raju Upendrakumar, film is Directed by S Raj and film is released on 2011