-
ಜನನಿ ಜನ್ಮಭೂಮಿ ನಮಗ
ಫಲವಿದೆ ಒಗ್ಗಟ್ಟಿನೊಳಗ
ಒಂದು ಚಂದ ಊರಿನೊಳಗ
ಒಡಕು ದುಃಖ ತರದು ನಮಗ
ಕಣ್ಣು ತೆರೆದು ನೋಡಿ ಈಗ
ನಮ್ಮ ಹಳ್ಳಿ ಐತಿ ಹೆಂಗ
ಮಾದರಿ ಎನಿಸಿ ದೇಶದೊಳಗ
ಮಾಡಬಹುದು ಊರ ಸ್ವರ್ಗ
ಆಗದ್ದೆನ್ನ ಬ್ಯಾಡಿ
ಊರಿಗೂರು ಒಂದುಗೂಡಿ
ವಿರಸ ಆಚೆ ದೂಡಿ
ಎಲ್ಲರು ಒಮ್ಮೆ ಮನಸ್ಸು ಮಾಡಿ
ಆಗದ್ದೆನ್ನ ಬ್ಯಾಡಿ
ಊರಿಗೂರು ಒಂದುಗೂಡಿ
ವಿರಸ ಆಚೆ ದೂಡಿ
ಎಲ್ಲರು ಒಮ್ಮೆ ಮನಸ್ಸು ಮಾಡಿ
ಮಾಡಿ ಗ್ರಾಮ ಸ್ವಚ್ಚಗ್ರಾಮ
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
ಆಗಬೇಕಾದ್ರೆ ನಿರ್ಮಲ ಗ್ರಾಮ
ಮೊದಲು ಇರಬೇಕು ಹಳ್ಳಿಮ್ಯಾಲೆ ಪ್ರೇಮ
ಊರಲ್ಲಿರುವಂತ ಎಲ್ಲ ಅಣ್ಣ ತಮ್ಮ
ಊರ ಉದ್ಧಾರಕ್ಕಾಕೋಣ ಪರಿಶ್ರಮ
ಪ್ರತಿಯೊಬ್ಬ ಮನೆಯಂಗ್ಳ ಸ್ವಚ್ಚ ಕಟ್ಟಾದರ
ಇಡಿ ಊರ ಕೇಳೊ ಸ್ವಚ್ಚ ಕಟ್ಟ
ಅವರ ಮ್ಯಾಲ್ ಇವರು
ಇವರ ಮ್ಯಾಲ್ ಅವರು
ದೂರ ಹೇಳದೆ ಇರಿ ನಿಷ್ಟ
ಮಾಡಿ ಗ್ರಾಮ ಸ್ವಚ್ಚಗ್ರಾಮ
||(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
ಬಹಿರ್ದೇಸಗೆ ಬಯಲಾಗ್ತ ಕುಂತ್ರೆ ಹೆಣ್ಣ
ಹೋದಂಗ್ ಆಗೋದಿಲ್ಲೇನು ಆಕಿ ಮಾನ
ಅದಕ ಮನಿಮನಿಗಿರಲಿ ಶೌಚಾಲಯ
ಭಕ್ತಿಗಿರಲಿ ಊರಾಗ ದೇವಾಲಯ
ಮಳಿನಿಂದ ನಿಂತ ನೀರು
ತರಬಹುದು ರೋಗರುಜಿನ
ಹರಿದೋಗಂಗ್ ಮಾಡ್ಸು ಘಟಾರ
ಕುಡಿಯಾಕ್ ಶುದ್ಧ ನೀರು
ಊರಾಗ ಬೀದಿ ದೀಪ
ರೋಡಿಗಾಕ್ಸಲೇ ಬೇಕು ಡಾಂಬರ
ಮಾಡಿ ಗ್ರಾಮ ಸ್ವಚ್ಚಗ್ರಾಮ
||(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
ಆಗಬಾರದವ್ವ ಮಕ್ಳು ಹುಚ್ಚೊ ಬ್ಯಾಲಿ
ಕಲಿಯಬೇಕವ್ವ ಎಲ್ಲರು ಶ್ಯಾಲಿ
ಬಡತ್ತಾನೈತಿ ಇದು ಸಾಧ್ಯ ಹೆಂಗ
ಅಂತ ಉಸುರ್ ಹಾಕೊ ಕಾಲ ಇಲ್ಲ ಈಗ
ಪುಕ್ಕಟೆ ಪುಸ್ತಕ ಡ್ರೆಸ್ಸವ್ವ ತೊಡಲಾಕ
ಕೊಡುತ್ತಾರ ಪೌಷ್ಟಿಕ ಬಿಸಿಯೂಟ
ಸೈಕಲ್ಲು ಹೊಡಿಲಾಕ
ಫೀ ಮಾಫಿ ಇಲ್ಲ ರೊಕ್ಕ
ಶಿಕ್ಷಣಕ ಇಲ್ಲ ಯಾವ ಸಂಕಟ
||ಮಾಡಿ ಗ್ರಾಮ ಸ್ವಚ್ಚಗ್ರಾಮ
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
-
ಜನನಿ ಜನ್ಮಭೂಮಿ ನಮಗ
ಫಲವಿದೆ ಒಗ್ಗಟ್ಟಿನೊಳಗ
ಒಂದು ಚಂದ ಊರಿನೊಳಗ
ಒಡಕು ದುಃಖ ತರದು ನಮಗ
ಕಣ್ಣು ತೆರೆದು ನೋಡಿ ಈಗ
ನಮ್ಮ ಹಳ್ಳಿ ಐತಿ ಹೆಂಗ
ಮಾದರಿ ಎನಿಸಿ ದೇಶದೊಳಗ
ಮಾಡಬಹುದು ಊರ ಸ್ವರ್ಗ
ಆಗದ್ದೆನ್ನ ಬ್ಯಾಡಿ
ಊರಿಗೂರು ಒಂದುಗೂಡಿ
ವಿರಸ ಆಚೆ ದೂಡಿ
ಎಲ್ಲರು ಒಮ್ಮೆ ಮನಸ್ಸು ಮಾಡಿ
ಆಗದ್ದೆನ್ನ ಬ್ಯಾಡಿ
ಊರಿಗೂರು ಒಂದುಗೂಡಿ
ವಿರಸ ಆಚೆ ದೂಡಿ
ಎಲ್ಲರು ಒಮ್ಮೆ ಮನಸ್ಸು ಮಾಡಿ
ಮಾಡಿ ಗ್ರಾಮ ಸ್ವಚ್ಚಗ್ರಾಮ
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
ಆಗಬೇಕಾದ್ರೆ ನಿರ್ಮಲ ಗ್ರಾಮ
ಮೊದಲು ಇರಬೇಕು ಹಳ್ಳಿಮ್ಯಾಲೆ ಪ್ರೇಮ
ಊರಲ್ಲಿರುವಂತ ಎಲ್ಲ ಅಣ್ಣ ತಮ್ಮ
ಊರ ಉದ್ಧಾರಕ್ಕಾಕೋಣ ಪರಿಶ್ರಮ
ಪ್ರತಿಯೊಬ್ಬ ಮನೆಯಂಗ್ಳ ಸ್ವಚ್ಚ ಕಟ್ಟಾದರ
ಇಡಿ ಊರ ಕೇಳೊ ಸ್ವಚ್ಚ ಕಟ್ಟ
ಅವರ ಮ್ಯಾಲ್ ಇವರು
ಇವರ ಮ್ಯಾಲ್ ಅವರು
ದೂರ ಹೇಳದೆ ಇರಿ ನಿಷ್ಟ
ಮಾಡಿ ಗ್ರಾಮ ಸ್ವಚ್ಚಗ್ರಾಮ
||(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
ಬಹಿರ್ದೇಸಗೆ ಬಯಲಾಗ್ತ ಕುಂತ್ರೆ ಹೆಣ್ಣ
ಹೋದಂಗ್ ಆಗೋದಿಲ್ಲೇನು ಆಕಿ ಮಾನ
ಅದಕ ಮನಿಮನಿಗಿರಲಿ ಶೌಚಾಲಯ
ಭಕ್ತಿಗಿರಲಿ ಊರಾಗ ದೇವಾಲಯ
ಮಳಿನಿಂದ ನಿಂತ ನೀರು
ತರಬಹುದು ರೋಗರುಜಿನ
ಹರಿದೋಗಂಗ್ ಮಾಡ್ಸು ಘಟಾರ
ಕುಡಿಯಾಕ್ ಶುದ್ಧ ನೀರು
ಊರಾಗ ಬೀದಿ ದೀಪ
ರೋಡಿಗಾಕ್ಸಲೇ ಬೇಕು ಡಾಂಬರ
ಮಾಡಿ ಗ್ರಾಮ ಸ್ವಚ್ಚಗ್ರಾಮ
||(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
ಆಗಬಾರದವ್ವ ಮಕ್ಳು ಹುಚ್ಚೊ ಬ್ಯಾಲಿ
ಕಲಿಯಬೇಕವ್ವ ಎಲ್ಲರು ಶ್ಯಾಲಿ
ಬಡತ್ತಾನೈತಿ ಇದು ಸಾಧ್ಯ ಹೆಂಗ
ಅಂತ ಉಸುರ್ ಹಾಕೊ ಕಾಲ ಇಲ್ಲ ಈಗ
ಪುಕ್ಕಟೆ ಪುಸ್ತಕ ಡ್ರೆಸ್ಸವ್ವ ತೊಡಲಾಕ
ಕೊಡುತ್ತಾರ ಪೌಷ್ಟಿಕ ಬಿಸಿಯೂಟ
ಸೈಕಲ್ಲು ಹೊಡಿಲಾಕ
ಫೀ ಮಾಫಿ ಇಲ್ಲ ರೊಕ್ಕ
ಶಿಕ್ಷಣಕ ಇಲ್ಲ ಯಾವ ಸಂಕಟ
||ಮಾಡಿ ಗ್ರಾಮ ಸ್ವಚ್ಚಗ್ರಾಮ
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)
(ನಮ್ಮ ಗ್ರಾಮ ನಿರ್ಮಲ ಗ್ರಾಮ
ನಮ್ಮ ಊರು ಸ್ವಚ್ಚ ಊರು)||
Janani Janma Bhoomi song lyrics from Kannada Movie Gandhiji Kanasu starring Ramesh S, Roopika, M N Lakshmidevi, Lyrics penned bySung by Srinivas, Music Composed by Gururaj Hoskote, film is Directed by Manu and film is released on 2014