Mugila Hanchanu Lyrics

in En Nin Problemmu

LYRIC

-
ಮುಗಿಲ ಅಂಚನು ಹಿಡಿವ ಹಂಬಲದಿ ಹೊರಟಿತೊಂದು ಜೀವ
ಹಿಡಿಯಲಾಗದಿರೆ ವಿಧಿಯ ಬೆಂಬಲದಿ ಪಡೆವುದಂತೆ ಸಾವ
ಹಿಡಿಜೀವ ಹಿಡಿದು ನೂರೊಂದು ವರುಷ ಬದುಕಿದಂತ ಯೋಗಿ
ಬರುವ ದಿನವ ನೆನೆದು ಬರಲಾರದೂರಿಗೆ ಹೋಗುತಿರುವನು ಸಾಗಿ
 
ನೇಗಿಲಿಡಿದ ಕೈ ನೇಣುಬಿಗಿದಿಹುದು ಎಂತ ಕ್ರೂರ ಆಟ
ಸತ್ತ ಸೈನಿಕನ ಶವವೊಂದು ಕಲಿಸಿತು ಮರೆಯದಂತ ಪಾಠ
ಹಸಿದ ಕೂಸಿನ ಎದುರು ಉಳ್ಳವರ ಜೋರು ಮೊರೆತ
ಹಿರಿ ಜೀವಕ್ಕೆ ಅರ್ಥವಾಗದೆ ಹೋಯಿತೀಗ ಇವರ ಗಣಿತ
ಸದ್ದು ಮಾಡಿದ ಮುತ್ಸತ್ತಿ ಸೇರುವನು ಸದ್ದೆ ಇರದ ನಾಡ
ಇವನ ವಶಪಡೆದು ಧನ್ಯವಾಗುವುದು ಊರಾಚೆ ಇರುವ ಮಸಣ
ಊರಾಚೆ ಇರುವ ಮಸಣ
 
ಸಂತೆ ಮುಗಿಸಿದ ಸಂತ ಹಿಡಿದನು ತನ್ನ ಸ್ವಂತ ದಾರಿ
ಇಷ್ಟಪಟ್ಟು ಇಹಲೋಕ ತ್ಯಜಿಸಿ ಹುಡುಕುತಿರನು ಗೋರಿ
ಕನಸ್ಸು ಕಂಡ ದಿನ ಬರದಿರಲು ಬದುಕ ಮೇಲೆ ಮುನಿಸು
ಮಣ್ಣ ಮಗನು ಮಣ್ಣ ಸೇರಲು ಮಾಡಿ ಆಯಿತು ಮನಸ್ಸು
ನೆರಳ ರೂಪದಿ ನಡೆವ ಇವರು ಮುಟ್ಟುತಾರೆ ಬಾನ
 ಎಲ್ಲ ಬಿಟ್ಟು ಈ ದಿಟ್ಟ ಜೀವವು ಆಗಿಹೋಯ್ತು ಲೀನ
ಆಗಿಹೋಯ್ತು ಲೀನ ಆಗಿಹೋಯ್ತು ಲೀನ

Mugila Hanchanu song lyrics from Kannada Movie En Nin Problemmu starring Channegowda, Singri Gowda, Abhishek H N, Lyrics penned by Lucky Sung by Naveen Sajju, Music Composed by Naveen Sajju, film is Directed by Lucky and film is released on 2017
Lyricist:

Lucky

Singers:

Naveen Sajju

Director:

Lucky

Music Director:

Naveen Sajju