-
ದುರ್ಗಾ ಶಾಂಭವಿ ದುರ್ಗಾ ಶಾಂಭವಿ ದುರ್ಗಾ ಶಾಂಭವಿ
ಐಗಿರಿ ನಂದಿನಿ
ದುರ್ಗಾ ಶಾಂಭವಿ ದುರ್ಗಾ ಶಾಂಭವಿ ದುರ್ಗಾ ಶಾಂಭವಿ
ನಂದಿತಮೇದಿನಿ
ಹರಕೆಯ ತಂದೇವಮ್ಮ ಮಾರಮ್ಮ ನಿನ್ನ ಎದುರಲ್ಲಿ ನಿಂತೇವಮ್ಮ
ಹಕ್ಕುತರು ಬಂದೇವಮ್ಮ ಮಾರಮ್ಮ ನೀನೆ ಕಾಯಬೇಕು ಅಂದೇವಮ್ಮ
ಹರಕೆಯ ತಂದೇವಮ್ಮ ಮಾರಮ್ಮ ನಿನ್ನ ಎದುರಲ್ಲಿ ನಿಂತೇವಮ್ಮ
ಹಕ್ಕುತರು ಬಂದೇವಮ್ಮ ಮಾರಮ್ಮ ನೀನೆ ಕಾಯಬೇಕು ಅಂದೇವಮ್ಮ
ಕೆಂಪು ಕಣಗಲೆ ಬತ್ತಿಹೂವು ತಂದೆವು ಹಣ್ಣು ಕಾಯಿ ಪೂಜೆಗಮ್ಮ
ನಾರಿರೆಲ್ಲ ತಂಬಿಟ್ಟಿನ ಆರತಿ ನಿಂಗಾಗಿ ತಂದಾರಮ್ಮ
ಅಮ್ಮ ಮೂಕಾಂಬಿಕೆ ಅಮ್ಮ ಲೋಕಾಂಬಿಕೆ ಅಮ್ಮ ಗಂಗಾಂಬಿಕೆ ಮಾರಮ್ಮ
ನೀನೆ ರಾಜೇಶ್ವರಿ ನೀನೆ ಚೌಡೇಶ್ವರಿ ನೀನೆ ಮಹೇಶ್ವರಿ ಮಾರಮ್ಮ
ಮಾರಮ್ಮ ಮಾರಮ್ಮ
ಊರನೆಲ್ಲ ಗೆಲ್ಲುವಂತ ಮೇಲೆ ಎದ್ದು ನಿಲ್ಲುವಂತ
ವರಗಳ ಕೊಟ್ಟೆ ನೀನು ಮಾರಮ್ಮ
ಓಂಕಾರ ಮಾಡಿದಾಗ ಕಂದನ ಹಾಗೆ ನೋಡಿದೆ
ಹೂಮಾಲೆ ಹಾಕಿದಾಗ ದಾರಿಗೆ ಹೂವ ಹಾಸಿದೆ
ಶತ್ರುಗಳ ನಾಶ ಮಾಡಿ ಮಿತ್ರರನ್ನು ಒಂದು ಮಾಡಿ
ಬೆನ್ನ ಹಿಂದೆ ನಿಂತೆ ನೀನು ಮಾರಮ್ಮ
ಆಚಾರ ನೀನೆ ಎಂದು ಲೋಕವ ಸಾರಿ ಹೇಳಿದೆ
ಈ ಭಾರ ನೀಗು ಎಂದು ಮಾನವ ಜಾತಿ ಬೇಡಿದೆ
ನೀನೆ ಎಲ್ಲಮ್ಮ ಕಲ್ಲಮ್ಮ ಮಲ್ಲಮ್ಮ ಕೋಟಿರೂಪ ನಿಂದೈತೆ
ನೀನೆ ದುರ್ಗಮ್ಮ ದಾನಮ್ಮ ದೇವಮ್ಮ ನೂರುನಾಮ ನಿಂಗೈತೆ
ನಾವು ಬೇಡೋರು ನೀನೇನೆ ನೀಡೋಳು
ನಾವು ನೆನೆಯೋರು ನೀನೇನೆ ಕಾಯೋಳು
ನೀನೆ ಕೆಂಪಮ್ಮನು ನೀನೆ ಎಲ್ಲಮ್ಮನು ನೀನೆ ಅಣ್ಣಮ್ಮನು ಮಾರಮ್ಮ
ನೀನೆ ಗಂಗಮ್ಮನು ನೀನೆ ಗೌರಮ್ಮನು ನೀನೆ ಜುಂಜಮ್ಮನು ಮಾರಮ್ಮ
ಅಮ್ಮ ಮಾರಮ್ಮ ನಮ್ಮ ಊರಮ್ಮ ತಾಯೆ ಕಾಪಾಡಮ್ಮ
ಚಂಡಿ ನೀನಮ್ಮ ಚೌಡಿ ನೀನಮ್ಮ ಊರ ಕಾಪಾಡಮ್ಮ
ಕನ್ಯೆರಿಗೆ ತಾಳಿ ಕೊಟ್ಟೆ ಬಂಜೆರಿಗೆ ಕೂಸು ಕೊಟ್ಟೆ
ಬಾಳಿಗೊಂದು ಅರ್ಥ ಕೊಟ್ಟೆ ಮಾರಮ್ಮ
ಬ್ರಹ್ಮಾಂಡ ಮಾಯೆ ನೀನು ಭೂಮಿಯ ನೀನೆ ಮಾಡಿದೆ
ಮಾತಾಡೊ ತಾಯಿ ನೀನು ಕಾಲವ ನೀನೆ ಮೀರಿದೆ
ದುಷ್ಟರನ್ನು ಶಿಕ್ಷಿಸಿದೆ ಶಿಷ್ಟರನ್ನು ರಕ್ಷಿಸಿದೆ
ಕಷ್ಟವೆಲ್ಲ ಕರಗಿಸಿದೆ ಮಾರಮ್ಮ
ವೇದಾಂತ ಸಾರ ನೀನೆ ವೇದನೆ ನೀಗೊ ದೇವತೆ
ಜೋಪಾನ ಮಾಡು ನಮ್ಮ ಬಾಳನು ನೀನೆ ಪೂಜಿತೆ
ನೀನೆ ಕಬ್ಬಾಳಿ ಆಂಕಾಳಿ ಮಾಂಕಾಳಿ ಎಲ್ಲ ನಿನ್ನ ಆಟನೆ
ನೀನೆ ಭದ್ರಮ್ಮ ರುದ್ರಮ್ಮ ಮೈಸಮ್ಮ ಬಾಳು ಭಿಕ್ಷೇನೆ
ಜಾತ್ರೆ ಊರೆಲ್ಲ ನೀನಿಲ್ದೆ ಏನಿಲ್ಲ
ಪಾತ್ರ ನಾವೆಲ್ಲ ನೀನಿಲ್ದೆ ನಾವಿಲ್ಲ
ನೀನೆ ವಾಗೇಶ್ವರಿ ನೀನೆ ಕಾಟೇಶ್ವರಿ ನೀನೆ ಸರ್ವೇಶ್ವರಿ ಮಾರಮ್ಮ
ನೀನೆ ವಜ್ರೇಶ್ವರಿ ನೀನೆ ಚಕ್ರೇಶ್ವರಿ ನೀನೆ ಲೋಕೇಶ್ವರಿ ಮಾರಮ್ಮ
ಅಮ್ಮ ಮಾರಮ್ಮ ನಮ್ಮ ಊರಮ್ಮ ತಾಯೆ ಕಾಪಾಡಮ್ಮ
ಚಂಡಿ ನೀನಮ್ಮ ಚೌಡಿ ನೀನಮ್ಮ ಊರ ಕಾಪಾಡಮ್ಮ
ಮಾರಮ್ಮ ಕಾಪಾಡಮ್ಮ ನಮ್ಮ ಊರಮ್ಮ
Harakeya Thandevamma song lyrics from Kannada Movie Betthanagere starring Akshay, Sumanth Shailendra, Nayana, Lyrics penned by V Nagendra Prasad Sung by Kailash Kher, Music Composed by Rajesh Ramanath, film is Directed by B G Mohan Gowda and film is released on 2015