Kannigagi Kannugala Lyrics

in Akshi

LYRIC

ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ
 
|| ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ…||
 
ಕಣ್ಣಿದ್ದು ಕುರುಡಾಗದೆ…
ಕುರುಡರಿಗೆ ಕಣ್ಣಾಗಿರಿ..
ಕ್ಷಣ ಕ್ಷಣಕೂ ಸಾಯುವವರ
ಕಂಗಳಾ ಕೊಲ್ಲದಿರಿ…
ಆ ಅಂತರಂಗ ಬೆಳಕಿಗೆ
ಬಣ್ಣ ನೀಡೋ ಕಣ್ಣಾಗು
ನೀ ಸತ್ತರೂ ಬದುಕುವ
ಕೆಲಸ ಮಾಡಿ ಮಣ್ಣಾಗು..
ಆ ಅಂತರಂಗ ಬೆಳಕಿಗೆ
ಬಣ್ಣ ನೀಡೋ ಕಣ್ಣಾಗು
ನೀ ಸತ್ತರೂ ಬದುಕುವ
ಕೆಲಸ ಮಾಡಿ ಮಣ್ಣಾಗು..
 
|| ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ…||
 
ಜೀವವಿರದಾ ಆ ದೇಹಕೆ…
ಮುಕ್ತಿಯನ್ನು ನೀಡುವ ಬದಲು
ಬದುಕಿರುವಾ ಬಾಳಿಗೆ
ನೆರವಾಗುವ ಬೆಳಕು ನೀಡುವಾ
ಜೀವವಿರದಾ ಆ ದೇಹಕೆ…
ಮುಕ್ತಿಯನ್ನು ನೀಡುವ ಬದಲು
ಬದುಕಿರುವಾ ಬಾಳಿಗೆ
ನೆರವಾಗುವ ಬೆಳಕು ನೀಡುವಾ
ಆ ಕತ್ತಲೆಯ ಅಳಿಸಿ ಹಾಕಿ
ಬೆಳಕ ತುಂಬುವಾ…
ಆ ಭಾವನೆಯ ಬಣ್ಣ ಕಣ್ಣಾಗಲಿ… 
ಆ ಕತ್ತಲೆಯ ಅಳಿಸಿ ಹಾಕಿ
ಬೆಳಕ ತುಂಬುವಾ…
ಆ ಭಾವನೆಯ ಬಣ್ಣ ಕಣ್ಣಾಗಲಿ… 
 
|| ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ…||
 
ಕಾಣದವರು ಜಗವ ನೋಡಲು
ನಿನ್ನಕ್ಷಿ ಸಾಕ್ಷಿಯಾಗಲಿ
ಮರುನೋಟದಿ ಮತ್ತೆ…
ಮರುಹುಟ್ಟು ನೀ ಪಡೆಯುವೇ
ಈ ಸಮಾಜದ ಕಣ್ಣಾಗುವ
ಕಾಯಕವ ಮಾಡುತಾ…
ಇದನು ತಿಳಿದು ತಿಳಿಸುತಾ
ಸಾಗು ಎಂದೆಂದೂ ನೀ ಮುಂದೆ
ಈ ಸಮಾಜದ ಕಣ್ಣಾಗುವ
ಕಾಯಕವ ಮಾಡುತಾ…
ಇದನು ತಿಳಿದು ತಿಳಿಸುತಾ
ಸಾಗು ಎಂದೆಂದೂ ನೀ ಮುಂದೆ
 
|| ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ
 
ಕಣ್ಣಿಗಾಗಿ ಕಣ್ಣುಗಳ
ಹುಡುಕಾಟದ ಹೋರಾಟ
ಕತ್ತಲಾ ಜೀವಕೆ
ಹೊಸದೊಂದು ನೋಟ….||

Kannigagi Kannugala song lyrics from Kannada Movie Akshi starring Govinde Gowda, Ilaa Vitla, Master Mithun, Lyrics penned by Kalaadegula Srinivas Sung by Manasa Holla, Music Composed by Kalaadegula Srinivas, film is Directed by Manoj kumar and film is released on 2021