ಬಿಸಿಲಿನ ಬೆಸುಗೆಯ ಬಯಸಿದ ಚಿಟ್ಟೆ ನಾ
ಬಿಸಿಲಿನ ಬೆಸುಗೆಯ ಬಯಸಿದ ಚಿಟ್ಟೆ ನಾ
ಹಾರುವ ಹಸಿವನು ಒಡಲಲಿ ಇಟ್ಟೆ ನೀ
ಕೊಳಲನೂದುವ ಕನಸ್ಸುಗಳ್ಳ ನೀ
ನವಿಲ ನಾಚಿಸೊ ಗೊರವ ಗೊಲ್ಲ ನೀ
ನನ್ನ ಚುಂಬಿಸಿ ಮತ್ತೆ ಬದುಕಿಸಿ ಶಾಪಗ್ರಸ್ಥೆ ನಾ ಮುಕುತಿ ನೀಡಿದೆ
||ಬಿಸಿಲಿನ ಬೆಸುಗೆಯ ಬಯಸಿದ ಚಿಟ್ಟೆ ನಾ
ಹಾರುವ ಹಸಿವನು ಒಡಲಲಿ ಇಟ್ಟೆ ನೀ||
ಸುಖವ ಬಯಸುವ ಹಿಂಸೆಯ ನಾ ಭವಿಸಿ ಭವಿಸಿ ಹುಣ್ಣಾದೆನು
ಶಾಹಿ ಮುಟ್ಟದ ಕವಿತೆ ನಾ ನಾ ವಿಷವ ಮೆತ್ತ ಹಣ್ಣಾದೆನು
ನಿನ್ ನೆರಳ ಅದ್ದಿ ಭೂಮಿ ಹುದ್ದಿ ನೀಡಿದೆ ಈ ಜೋಪಡಿಯ
ಮುದ್ದಾಡಿ ಮಗಳೆ ಅಳಿಯದ ನನ್ ತಾಯಿಯ ಲಾಲಿಯ ಪ್ರಾರ್ಥನ
||ಬಿಸಿಲಿನ ಬೆಸುಗೆಯ ಬಯಸಿದ ಚಿಟ್ಟೆ ನಾ
ಹಾರುವ ಹಸಿವನು ಒಡಲಲಿ ಇಟ್ಟೆ ನೀ||
ಕಬ್ಬಿನ ರುಚಿ ಮಾತಲಿ ಹಬ್ಬಿದ ನಾಭಿ ರುಚಿ ಎದೆಯಲಿ
ಕವಡೆಯಾಟದ ಪುಳಕವ ಮತ್ತೊಮ್ಮೆ ತಂದ ನೀ ಯಾನವ
ನನ್ ಹಣೆಯ ಮುಟ್ಟಿ ಕೊರಳ ಸುತ್ತಿ ನೀಡಿದ ಮಡದಿಯ ಗೌರವ
ಆ ದೀಪದ ತೀರ್ಥವು ಕೈಯ್ಯಲಿ
ಈ ಭಕುತಿಯ ಸ್ವಾರ್ತವು ಜಯಿಸಲಿ