Bengaluru's Suprabhata Lyrics

ಬೆಂಗಳೂರು ಸುಪ್ರಭಾತ Lyrics

in Aachar & Co

in ಆಚಾರ್‌ & ಕೋ.

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೌಸಲ್ಯ ಪ್ರಾವಿಷನ್‌ ಸ್ಟೋರು ಮುಂದೆ
ಕೋಳಿ ಕೋ ಎಂದಿತು
ಮತ್ತೊಂದು ಇರುಳ ಕಳೆದು
ಬೆಂಗ್ಳೂರಿಗೆ ಬೆಳಗಾಯಿತು
ಚಿಕ್ಪೇಟೆ ದೊಡ್ಪೇಟೆ ಮರ್ಕೆಟ್ಟು ಜಯನಗರ ಮಲ್ಲೇಶ್ವರ
ಎಲ್ಲೆಲ್ಲು ಜನಸಂಚಾರ ಬೆಂಗ್ಲೂರು ಬಿಜಿ ಆಯಿತು
ಸುಮಂಗಲಿಯರು ಎದ್ದು ಮುಂಜಾನೆ ಮಿಂದು
ಉಟ್ಟಿಹರು ಮಡಿಯ ಬಟ್ಟೆ
ಬಾಗಿಲನು ತೆರೆದು ರಂಗೋಲಿ ಎಳೆದು
ಸುತ್ತಿದರು ತುಳಸಿ ಕಟ್ಟೆ
ಮನೆದೇವರನ್ನು ಮನದಲ್ಲಿ ನೆನೆದು
ಬೆಳಗಿದರು ಆರತಿ ತಟ್ಟೆ
ಮುಗಿದಾಗ ಪೂಜಾ ವಿಧಿ ಕೇಳಾಯ್ತು ಘಂಟೆ
ಕಣ್ಣುಜ್ಜಿ ಕುಳಿತ ಮನೆಮಕ್ಕಳೆಲ್ಲ ಮೇಲೆದ್ದರಾಗ
ಸಾಲಾಗಿ ನಿಂತು ಬಚ್ಚಲಿನ ಮುಂದೆ ಸಿಗಲೆಂದು ಜಾಗ
ಬೆಂಗ್ಳೂರು ಚಳಿಗೆ ಬಿಸಿನೀರ ಸ್ನಾನ ಮುಗಿಯದು ಅಷ್ಟು ಬೇಗ
ಮನೆತುಂಬ ಜನ ಇದ್ದರೆ ಇದೇ ನಿತ್ಯರಾಗ
ಓದುತ್ತ ಪೇಪರು ಕುಡಿಬೇಕು ಆಚಾರು
ಸಿಹಿ ಇರದ ಕಾಫಿಯನ್ನು
ಗ್ರಹಚಾರ ಇಂದು ತಡವಾಗಿ ಬಂದು
ಕೂಗಿದನು ಹಾಲಿನವನು
ಕೆಚ್ಚಲಲಿ ಕರೆದ ಬೆಚ್ಚನೆಯ ಹಾಲು
ತುಂಬಿಸಲಿ ಕಾಮಧೇನು
ಅದುವರೆಗು ನೋಡೊನ ಹೊಸ ಸುದ್ದಿಯೇನು
ನುಡಿದಂತೆ ನಡೆವ ಸರ್ಕಾರ ನಮದು
ಎಂದರು ಬಿ ಡಿ ಜತ್ತಿ
ರಾಜ್ಯ ವಿಂಗಡಣೆ ಗಡಿನಾಡ ಜನರ
ತಲೆ ಮೇಲೆ ತೂಗು ಕತ್ತಿ
ಚೀನಾದ ಜೊತೆಗೆ ಸಂಬಂಧಗಳನ್ನು ಸುಧಾರಿಸಲು
ಹೊಸ ನೀತಿ
ಈ ದೇಶ ಎಂದಾದಿತೋ ಜಾಗತಿಕ ಶಕ್ತಿ
ಮನೆಯೆದುರು ನಿಂತ ಅಂಬಾಸಿಡರ್‌ ಕಾರಿನಡೆ
ಊರ ಚಿತ್ತ
ನೆರೆಹೊರೆಯ ಎನ್ನಿ ಓನರಿನ ಪ್ರೈಡು ಎಲ್ಲರಿಗು
ಕಣ್ಣು ಅದರತ್ತ
ಮೂರ್ನಾಲ್ಕು ಬಾರಿ ಹಾರನ್‌ ಬರಲು ತಡವಾಗಿದೆ
ಎಂದು ಅರ್ಥ
ನಾನೀಗ ಮುಗಿಸುವೆನು ಈ ಸುಪ್ರಭಾತ

ಕೌಸಲ್ಯ ಪ್ರಾವಿಷನ್‌ ಸ್ಟೋರು ಮುಂದೆ
ಕೋಳಿ ಕೋ ಎಂದಿತು
ಮತ್ತೊಂದು ಇರುಳ ಕಳೆದು
ಬೆಂಗ್ಳೂರಿಗೆ ಬೆಳಗಾಯಿತು
ಚಿಕ್ಪೇಟೆ ದೊಡ್ಪೇಟೆ ಮರ್ಕೆಟ್ಟು ಜಯನಗರ ಮಲ್ಲೇಶ್ವರ
ಎಲ್ಲೆಲ್ಲು ಜನಸಂಚಾರ ಬೆಂಗ್ಲೂರು ಬಿಜಿ ಆಯಿತು
ಸುಮಂಗಲಿಯರು ಎದ್ದು ಮುಂಜಾನೆ ಮಿಂದು
ಉಟ್ಟಿಹರು ಮಡಿಯ ಬಟ್ಟೆ
ಬಾಗಿಲನು ತೆರೆದು ರಂಗೋಲಿ ಎಳೆದು
ಸುತ್ತಿದರು ತುಳಸಿ ಕಟ್ಟೆ
ಮನೆದೇವರನ್ನು ಮನದಲ್ಲಿ ನೆನೆದು
ಬೆಳಗಿದರು ಆರತಿ ತಟ್ಟೆ
ಮುಗಿದಾಗ ಪೂಜಾ ವಿಧಿ ಕೇಳಾಯ್ತು ಘಂಟೆ
ಕಣ್ಣುಜ್ಜಿ ಕುಳಿತ ಮನೆಮಕ್ಕಳೆಲ್ಲ ಮೇಲೆದ್ದರಾಗ
ಸಾಲಾಗಿ ನಿಂತು ಬಚ್ಚಲಿನ ಮುಂದೆ ಸಿಗಲೆಂದು ಜಾಗ
ಬೆಂಗ್ಳೂರು ಚಳಿಗೆ ಬಿಸಿನೀರ ಸ್ನಾನ ಮುಗಿಯದು ಅಷ್ಟು ಬೇಗ
ಮನೆತುಂಬ ಜನ ಇದ್ದರೆ ಇದೇ ನಿತ್ಯರಾಗ
ಓದುತ್ತ ಪೇಪರು ಕುಡಿಬೇಕು ಆಚಾರು
ಸಿಹಿ ಇರದ ಕಾಫಿಯನ್ನು
ಗ್ರಹಚಾರ ಇಂದು ತಡವಾಗಿ ಬಂದು
ಕೂಗಿದನು ಹಾಲಿನವನು
ಕೆಚ್ಚಲಲಿ ಕರೆದ ಬೆಚ್ಚನೆಯ ಹಾಲು
ತುಂಬಿಸಲಿ ಕಾಮಧೇನು
ಅದುವರೆಗು ನೋಡೊನ ಹೊಸ ಸುದ್ದಿಯೇನು
ನುಡಿದಂತೆ ನಡೆವ ಸರ್ಕಾರ ನಮದು
ಎಂದರು ಬಿ ಡಿ ಜತ್ತಿ
ರಾಜ್ಯ ವಿಂಗಡಣೆ ಗಡಿನಾಡ ಜನರ
ತಲೆ ಮೇಲೆ ತೂಗು ಕತ್ತಿ
ಚೀನಾದ ಜೊತೆಗೆ ಸಂಬಂಧಗಳನ್ನು ಸುಧಾರಿಸಲು
ಹೊಸ ನೀತಿ
ಈ ದೇಶ ಎಂದಾದಿತೋ ಜಾಗತಿಕ ಶಕ್ತಿ
ಮನೆಯೆದುರು ನಿಂತ ಅಂಬಾಸಿಡರ್‌ ಕಾರಿನಡೆ
ಊರ ಚಿತ್ತ
ನೆರೆಹೊರೆಯ ಎನ್ನಿ ಓನರಿನ ಪ್ರೈಡು ಎಲ್ಲರಿಗು
ಕಣ್ಣು ಅದರತ್ತ
ಮೂರ್ನಾಲ್ಕು ಬಾರಿ ಹಾರನ್‌ ಬರಲು ತಡವಾಗಿದೆ
ಎಂದು ಅರ್ಥ
ನಾನೀಗ ಮುಗಿಸುವೆನು ಈ ಸುಪ್ರಭಾತ

Bengaluru's Suprabhata song lyrics from Kannada Movie Aachar & Co starring Sindhu Sreenivasa Murthy,Ashok Lakshmi Narasimhaiah,Sudha Belawadi, Lyrics penned by Trilok Trivikrama Sung by Rama Mani, Music Composed by Bindhumalini, film is Directed by Sindhu Sreenivasa Murthy and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ