Blog

ಪರಪಂಚ ನೀನೆ ನನ್ನ ಪರಪಂಚ ನೀನೆ ನೀನೆ ಎಲ್ಲಾ ಬೇರೇನಿಲ್ಲ...

06 Aug 2020
ಪರಪಂಚ  ನೀನೆ   ನನ್ನ  ಪರಪಂಚ  ನೀನೆ  ನೀನೆ  ಎಲ್ಲಾ ಬೇರೇನಿಲ್ಲ...  ಕಷ್ಟ  ನನ್ನೊಳಗೆ  ಮಣ್ಣಾಗಲಿ

ಪರಪಂಚ  ನೀನೆ 

ನನ್ನ  ಪರಪಂಚ  ನೀನೆ

ನೀನೆ  ಎಲ್ಲಾ ಬೇರೇನಿಲ್ಲ...

ಕಷ್ಟ  ನನ್ನೊಳಗೆ  ಮಣ್ಣಾಗಲಿ

ಜಗದ  ಸುಖ  ನಿನ್ನ  ಕೈ ಸೇರಲಿ..

ಪರಪಂಚ  ನೀನೆ.....

 

ಪರಪಂಚ ನೀನೆ.. ನನ್ನ ಮೊಬೈಲ್’ನ ರಿಂಗ್ಟೋನ್. ಅದು ಬರೋದು ನನ್ ಮಗ ಕಾಲ್ ಮಾಡಿದಾಗ ಮಾತ್ರ.. ಹೌದು ಮಗನೇ ನೀನೆ ನನ್ ಪ್ರಪಂಚ.. ಬದುಕಿರೋದು ನಿನಗಾಗಿಯೇ, ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಎದುರಿಸಿ ನಿಂತಿದೀನಿ ಅಂದ್ರೆ ಅದು ನಿನಗೋಸ್ಕರ. ಒಮ್ಮೆ ಹೀಗೆ ಮೈಸೂರಿಂದ ಕಾನ್ಫರೆನ್ಸ್ ಮುಗಿಸಿಕೊಂಡು ಬಸ್ಸಲ್ಲಿ  ಬರ್ತಿದ್ದೆ, ಬಸ್ಸಲ್ಲಿ ಬರೋ ನಿದ್ದೆ ಇನ್ನೆಲ್ಲಿ ಬರುತ್ತೆ ಹೇಳಿ ..ಹಾಡು ಪರಪಂಚ ನೀನೆ.. ನನ್ನ ಪರಪಂಚ ನೀನೆ…. ಎಚ್ಚರ ಅಯ್ತು ಯಾಕೆ ಅಂದ್ರೆ ಅದು ನನ್ ಮಗನ ಕಾಲ್ ಆಗಿತ್ತು.. ಅಮ್ಮ ಎಲ್ಲಿದಿಯಾ ಅಂದ, ಜಯನಗರದ ಅತ್ರ ಇದೀನಿ .ಇನ್ನೊಂದು ಹತ್ತು ನಿಮಿಷ ... ಅನ್ನೋದ್ರೊಳಗೆ ಮೊಬೈಲ್ ಸ್ವಿಚ್ ಆಫ್ ಅಯ್ತು. ಇನ್ನೇನು ಹತ್ರ ಇದೀನಿ ಅಂತ ಸುಮ್ಮನೆ ಆದೆ.. ಮಳೆ ಜೋರಾಗಿ ಬರ್ತಿತ್ತು ಮನೆಗೆ ಹೋಗೋಕೆ ಆಟೋನು ಸಿಗ್ಲಿಲ್ಲ, ಫೋನ್ ಮಾಡೋಣ ನನ್ ಮಗನಿಗೆ ಅಂದ್ರೆ ಫೋನ್ ಸ್ವಿಚ್ ಆಫ್... ಅಷ್ಟೂ ದೂರದಲ್ಲಿ ಯಾರೋ ಬೈಕ್ ನಿಲ್ಸಿ ಕೊಂಡಿರೋದು ಕಾಣ್ತಾ ಇತ್ತು.ಮುಖದ ಮೇಲೆ ಗಾಡಿಯ ಬೆಳಕು ಜೋರಾಗಿ ಬಿತ್ತು, ಸಡನ್ ಆಗಿ ಗಾಡಿ ಪಕ್ದಲ್ಲೇ ಬಂದು ನಿಲ್ತು, ಭಯ ಆಯ್ತು ಯಾರೋ ಕಳ್ಳರು ಇರಬಹುದು ಅಂತ ಹಿಂದೆ ಸರಿದೆ, ಆದ್ರೆ ಇವನು ದುಡ್ಡು ಕದಿಯೋ ಕಳ್ಳ ಅಲ್ಲ ನನ್ನ ಮನಸನ್ನೇ ಕದ್ದಿರೋ ನನ್ನ ಬಂಗಾರದ ಚೂರು... ನನ್ ಮಗ.. ಅಂತೂ ಇಂತೂ ಮಳೆಯಲಿ ಹೇಗೋ ಮಾಡಿ ಮನೆ ಸೇರಿದ್ವಿ..ನನಗಾಗಿ ಅವನು ಅಡುಗೆ ಮಾಡಿದ್ದ ಏನು ಅಂತೀರಾ ಉಪ್ಪಿಟ್ಟು.. ಅವನಿಗೆ ಬರೋದು ಅದೊಂದೇ ಅದು ಅವನ, ನನ್ನ ಫೇವರಿಟ್..ಚಿಕ್ಕೊನಾಗಿದ್ದಾಗಿಂದ ಉಪ್ಪಿಟ್ಟು ಅಂದ್ರೇನೆ ಅವನಿಗೆ ಇಷ್ಟ. ಒಂಟಿಯಾಗಿ ಮಗನನ್ನ ಸಾಕೋ ನಿರ್ಧಾರ ಮಾಡಿದ ಟೈಮ್ ಅಲ್ಲಿ ಉಪ್ಪಿಟ್ಟು ರಾತ್ರಿ ಊಟವಾಗಿದ್ದು ಸುಳ್ಳಲ್ಲ, ಯಾಕಂದ್ರೆ ಅವನಿಗಾಗಿ ದುಡಿಯೋಕೆ ಹೋದಾಗ ಬರೋದು ತಡವಾಗ್ತಿತ್ತು ಬಂದು ಬೇರೆ ಅಡುಗೆ ಮಾಡೋಕೆ ಟೈಮ್ ಇಲ್ದೆ ಇರುವಾಗ ಬೇಗ್ ಆಗ್ತಾ ಇದ್ದಿದ್ದು ಉಪ್ಪಿಟ್ಟು....


ನನ್ನ ಪ್ರಪಂಚ ನನ್ನ ಪ್ರಾಣ ನನ್ನ ಬದುಕು ಎಲ್ಲಾ ನನ್ನ ಮಗನೇ, ಚಿಕ್ಕ ಚಿಕ್ಕ ಕೆಲಸ ಮಾಡಿ ಈಗ ಅವನನ್ನ ದೊಡ್ಡವನನ್ನಾಗಿ ಮಾಡಿ ನಿಂತಿದೀನಿ,.. ಈಗ ಅವನನ್ನ ದೊಡ್ಡವನನ್ನಾಗಿ ಮಾಡಿ ನಿಂತಿದ್ದೀನಿ.. ಜೀವನದ ಪುಟಗಳನ್ನ ಒಮ್ಮೆ ಹಿಂತಿರುಗಿ ನೋಡಿದ್ರೆ ಅದೆಷ್ಟು ನೋವು ಅದೆಷ್ಟು ಕಷ್ಟ, ಈಗ ಅದು ಯಾವ್ದು ಇಲ್ಲ ಮಗ ಈಗ ಒಳ್ಳೆ ಕೆಲಸದಲ್ಲಿ ಇದ್ದಾನೆ, ಅವನ ಇಷ್ಟ ಕಾರು ನಾಳೆ ಅವನ ಕೈ ಸೇರುತ್ತೆ ಯಾಕಂದ್ರೆ ನಾಳೆ ಅವನ ಹುಟ್ಟಿದ ದಿನ.. ಕಷ್ಟ ನನ್ನೊಳಗೆ ಮಣ್ಣಾಗಬೇಕು ಸುಖ ಅವನ ಜೊತೆಯಲ್ಲಿಯೇ ಇರಬೇಕು..ಅವನು ಇಷ್ಟ ಪಟ್ಟ ಹುಡುಗಿ ಜೊತೆಗೆ ಮುಂದಿನ ವಾರ ಅವನ ಮದುವೆ, ಆಮೇಲೆ ಎಲ್ಲಾ ಅವಳ ಜವಾಬ್ದಾರಿ ನಾನು ನೆಮ್ಮದಿಯಾಗಿ ಹೋಗ್ತೀನಿ, ಯಾಕಂದ್ರೆ ಹುಡುಗಿ ಒಳ್ಳೆಯವಳು ಇವನನ್ನ ಚನ್ನಾಗಿ ನೋಡ್ಕೋತಾಳೆ,ಇವರಿಗೆ ಕೊಡೋಕೆ ಮನೆ ರೆಡಿ ಮಾಡಿ ಇಟ್ಟಿದೀನಿ, ಮುಂದೆ ಅವರ ಬದುಕು ಅಲ್ಲೇ.. ಸುಖದ ಸ್ವಪ್ನ ಗಾನ ಅವರ ಜೀವದಲ್ಲಿ ಇರಲಿ.. ನನಗೂ ಈಗ ಕಷ್ಟಗಳಿಲ್ಲ ಇನ್ನು ಮುಂದೆ ಸಮಾಜ ಸೇವೆ ಮಾಡ್ತಾ ಕೊನೆಗಳಿಗೆಗಳನ್ನ ಕಳೀತೀನಿ.

Please Login to View/Add comments

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ