Blog

ಮರೆಯದೆ ಕ್ಷಮಿಸು ನೆನಪಾದರೆ ಕನಸನು ಒರೆಸು ಇರುಳಾದರೆ

05 Aug 2020
ಮರೆಯದೆ  ಕ್ಷಮಿಸು ನೆನಪಾದರೆ  ಕನಸನು  ಒರೆಸು ಇರುಳಾದರೆ

ಮರೆಯದೆ  ಕ್ಷಮಿಸು ನೆನಪಾದರೆ

ಕನಸನು  ಒರೆಸು ಇರುಳಾದರೆ

........................................

ನಿನದೆ  ಹಿತವ ಬಯಸಿ  ಒಲವೇ

ನಿನ್ನಿಂದ  ದೂರ  ಹೋಗುವೆ

.......................................

ಬದುಕಿದು  ನಡೆಸಿದೆ  ನಾಟಕ

ಬದುಕಲಿ  ಕೆರಳಿಸಿ  ಕೌತುಕ.

.....................................

ನಿನ್ನನ್ನು  ಕಂಡೇ  ತೀರುವೆ....

 

 

ಈಗ ಮಳೆ ಜಿನುಗುತಿದೆ,ಕತ್ತಲು ಆಗಿದೆ,ಬಾಲ್ಕಾನಿಲಿ ಮಾಡ್ಕೊಂಡಿರೋ ಪುಟ್ಟ ಗಾರ್ಡನ್ ಒಂದು ಟೀ ಟೇಬಲ್, 2 ಚೇರ್,ಟೀ ಕುಡಿತಾ ಕೂತಿದೀನಿ ಒಬ್ಬಳೇ. ..ಇವತ್ತಿಗೆ ಇಪತ್ತು ವರ್ಷಗಳು ಕಳೆದೊಯ್ತು, ನಾನು ನಿನ್ನಿಂದ ದೂರ ದೂರ ಬಂದು..ಆವತ್ತಿಂದ ರಾತ್ರಿಯಲ್ಲಿ ಟೀ ಕುಡಿತಾ ಕೂರ್ತಿನೀ..ಯಾಕಂದರೆ ಬೆಳಗ್ಗೆ ಇಂದ ರಾತ್ರಿವರೆಗೂ ನಾನು ನನ್ನ ಮಗನಿಗಾಗಿ ದುಡಿತ ದುಡಿತ ಟೀ ಕುಡಿಯೋಕೆ ನಿನಗಾಗಿ ನಾಲ್ಕು ಸಾಲು ಬರೆಯೋದಕ್ಕೆ ಪುರಸೊತ್ತೇ ಇಲ್ಲದ ಹಾಗೆ ಆಗಿಬಿಟ್ಟಿದೆ..ಆದರೆ ದಿನಾ ರಾತ್ರಿ ಬಾಲ್ಕನಿಯಲ್ಲಿ ಒಂದು ಚೇರ್ ನಿನಾಗಿ ನಿನ್ನ ಪಾತ್ರ ಮಾಡುತ್ತಿದೆ.. ಈಗಲೂ ನಾನು ಒಂಟಿ ಅಲ್ಲ ನೆನಪುಗಳೊಂದಿಗೆ ಚನ್ನಾಗಿಯೇ ಇದ್ದೇನೆ..ನಿನಗೆ ಗೊತ್ತಲ್ಲ ನಾನು ಹಾಡು ಕೇಳ್ತಾನೆ ಇರ್ತಿನಿ ಅಂತ ಹೀಗೆ FM ಹಾಕ್ದೆ,
ಬಂದಿದ್ದು ಅದೇ ಹಾಡು "ಮರೆಯದೆ ಕ್ಷಮಿಸು ನೆನಪಾದರೆ".... ನೀನು ನನ್ನ ಕ್ಷಮಿಸಬೇಕಾ? ನಾನು ನಿನ್ನ ಕ್ಷಮಿಸಬೇಕಾ ?.. ಗೊತ್ತಿಲ್ಲ.. ಆದ್ರೆ ನಿನ್ನ ಸಂತೋಷಕ್ಕಾಗಿಯೇ ನಾನು ದೂರ ಬಂದುಬಿಟ್ಟೆ...ನಿನಗೆ, ನಿನ್ನ achievements ಗೆ ನಾನು ನನ್ನ ಮಗ ತೊಂದರೆ ಆಗ್ತಾ ಇದೀವಿ ಅನ್ನಿಸ್ತು ಹಾಗೆ ನಿನ್ನನ್ನು ನಿನ್ನ ಅಪ್ಪ ಅಮ್ಮ ನೊಂದಿಗೆ ಇರಲು ಬಿಟ್ಟರೆ ನೀನು ಖುಷಿಯಾಗಿರ್ತಿಯ ಅನ್ಕೊಂಡು ನಿನಗೆ ಏನು ಹೇಳದೆ ಮಗು ಎತ್ಕೊಂಡು ದೂರ ಬಂದ್ಬಿಟ್ಟೆ.. ಬಂದಿದ್ದು ಒಳ್ಳೇದೇ ಅಯ್ತು ಈಗ ನೀನು ದೊಡ್ಡ ಬಿಸಿನೆಸ್ ಮ್ಯಾನ್ ಆಗಿದೀಯ..ಗೊತ್ತ ನಾನು ನಮ್ ಮಗನ್ನ ಚನ್ನಾಗಿ ಬೆಳ್ಸಿದೀನಿ ಈಗ ಅವನು ಹುಷಾರಾಗಿದಾನೆ, ನಿನ್ನ ಬಿಟ್ಟು ಬಂದ ಮೇಲೆ ಸಾಕಷ್ಟು ಪುಸ್ತಕಗಳನ್ನ ಓದಿದೆ ಸಾಕಷ್ಟು ಬರೆದೆ,ನಾನು ನಿನ್ನ ನೆನಪಿಸಿಕೊಳ್ಳೋ ಗೋಜಿಗೆ ಹೋಗೋದಿಲ್ಲ ಯಾಕಂದ್ರೆ ನಾನು ನಿನ್ನ ಮರೆತೇ ಇಲ್ಲ..ನನ್ನನ್ನು ನೀನು ಪ್ರೀತಿಸಿದೆಯೋ ಇಲ್ಲವೋ ಗೊತ್ತಿಲ್ಲ ನನಗೆ ಅದು ತಿಳಿಯಲು ಇಲ್ಲ.. ನಮ್ ಬದುಕಲ್ಲಿ ಏನೆಲ್ಲ ಅಗೋಯ್ತು, ನಿನ್ನ ನಡೆಯೇ ಬೇರೆ ನನ್ನದು ಬೇರೆ ಈಗ ನಾವಿಬ್ಬರು ಬೇರೆ ಬೇರೆ.. ಏನೇ ಇರಲಿ ನಿನ್ನ ಯಾಕೆ ಬಿಟ್ಟು ಬಂದೆ ಅಂತ ನಿನಗೆ ತಿಳಿಸದೇ ಬಂದಿದಕ್ಕೆ ಕ್ಷಮಿಸು..ನಿನ್ನನ್ನು ಒಮ್ಮೆ ನೋಡದೆ ನಾ ಸಾಯಲಾರೆ ಕಂಡಿತಾ ನಿನ್ನನ್ನು ಕಂಡೇ ತೀರುವೆ... ಮರೆಯದೆ ಕ್ಷಮಿಸು ನೆನಪಾದರೆ...
ನಿದ್ದೆ ಬಂದ ಅರಿವೇ ಇಲ್ಲ,..
ಎಚ್ಚರ ವಾಗಿದ್ದು ಬೆಳಗ್ಗೆಯೇ..
ಡೈರಿಯ ಹಾಳೆಗಳು ತುಂಬುತ್ತಾ ಬಂದಿದೆ.... ಎದೆಗೊತ್ತಿದೆ ಡೈರಿ, ಕಣ್ಣ ಮೇಲಿನ ಕನ್ನಡಕ ತಲೆ ಏರಿ ಮಲಗಿದೆ,ಪೆನ್ನು ಕೈಯಲ್ಲಿ ಹಾಗೆಯೇ ಇದೆ..ಹೀಗೆ ಅದೆಷ್ಟು ಬಾರಿ ಬರೆಯುತ್ತಲೇ ನಿದ್ದೆಗೆ ಜಾರಿದ್ದೇನೋ..

Please Login to View/Add comments

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ