Blog

ಹೂಮಳೆ ಹೂಮಳೆ ಹೂಗಳ ಸುರಿಮಳೆ

23 May 2021
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೂಸಮಳೆ......
 
ಹೂಮಳೆ ಚಿತ್ರದ ಟೈಟಲ್ ಟ್ರ್ಯಾಕ್...
ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದ ಈ ಹೂಮಳೆ ಹಾಡಿನ ಸಾಹಿತ್ಯವನ್ನು ಅವರೇ ಬರೆದು  ಡಾ ||ರಾಜಕುಮಾರ್ ಅವರಲ್ಲಿ ಹಾಡಿಸಿದ್ದಾರೆ....
 
ಈ ಹಾಡು ಬಹಳ ಇಷ್ಟ ಯಾಕೆ....? ಸಾಹಿತ್ಯವ, ಸಂಗೀತವ, ಅಥವಾ  ಆ ಅದ್ಭುತ ಕಂಠವ... ಎಲ್ಲದರ ಮಿಶ್ರಣವ... ಎಲ್ಲವೂ ಬೆರೆತೆ ಈ ಹಾಡು ಸೊಗಸಾಗಿದೆ ನಿಜ ಆದರೆ ಆ  ಸಾಹಿತ್ಯದ ಸಾಲುಗಳು ನಮ್ಮನ್ನ ವಿಚಾರ ಮಾಡುವಂತೆ  ಮಾಡಿವೆ...
 
ಮಾಘೀ ಕಾಲದಲ್ಲಿ
ಮೂಕವಾದೆ ಮೌನ ಕೋಗಿಲೆ..
ಈಗ ಏಕೆ ಹಾಡಿದೆ
ಏನ್ ಆಶ್ಚರ್ಯವ ನೋಡಿದೆ...
 
ಸುಮ್ಮನೆ ಇದ್ದವರು ಇದ್ದಕ್ಕಿದ್ದ ಹಾಗೆ ಖುಷಿಯಿಂದ ಹಾಡಿದರೆ ಆ ಸಂತೋಷಕ್ಕೆ ಏನ್ ಕಾರಣ ಎನ್ನೋದನ್ನು ವರ್ಣಿಸುವ ಸಾಲುಗಳು ಅವು... ಬಾಳಲ್ಲಿ ಸುಖ ಎಷ್ಟು ಇರುತ್ತೋ ಅದರಷ್ಟೇ ದುಃಖವೂ ಅಥವಾ ಅದಕ್ಕಿಂತ ಹೆಚ್ಚು ಅನ್ನಬಹುದು, ಹಳೆಯದನ್ನ ಅಳಿಸಲು ಸಾಧ್ಯವಿಲ್ಲ ಆದರೆ ಹೊಸದನ್ನ ಬರೆಯ ಬಹುದಲ್ಲವ, ಬಾಳಬೇಕು ಬದುಕಬೇಕು ಅಂದರೆ ನಾಳೆಗಳ ಮೇಲೆ ಭರವಸೆ ಬೇಕಲ್ಲವ, ಬದುಕಿನ ಸಾಗರದಲ್ಲಿ ಈಜಲು ಜೊತೆ ಬೇಕಲ್ಲವ...ಇದನ್ನ ಎಷ್ಟು ಸುಂದರವಾಗಿ ಹೇಳಿದ್ದಾರೆ...
 
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನೆನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ ಸುಲಭ ಪ್ರಯಾಣ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..
 
ಹಳೆಯ ನೋವುಗಳೆಲ್ಲ ರಾತ್ರಿ ಕಳೆದಂತೆ ಜಾರಿ ಹೋಗಿ, ಹೊಸಗಳಿಗೆಗಳು ಶುಭವನ್ನೇ ತರಲಿ ಸೂರ್ಯೋದಯದಂತೆ ಎನ್ನುವ ಈ ಹಾಡು ಎಷ್ಟೋ ಜನರಿಗೆ ನಾಳೆಯ ಬಗ್ಗೆ ಭರವಸೆ ನೀಡಿದೆ..ಇಲ್ಲಿ ಜೀವನವನ್ನ ಜೀವನದ ಸಂಗಾತಿಯನ್ನ, ನೆನ್ನೆ ನಾಳೆಗಳ ದುಗುಡವನ್ನ,ಕತ್ತಲು ಬೆಳಕಿನ ಈ ಜೀವನದ ಆಟವನ್ನು ಪ್ರಕೃತಿಯೊಂದಿಗೆ ಅದೆಷ್ಟು ಸೊಗಸಾಗಿ ಬೆರೆಸಿದ್ದಾರೆ..ಹೂಗಳನ್ನ ಉದುರಿಸಿದಾಗ ಈ ಭೂಮಿ ಹೇಗೆ ನಾಚಿ ಮದುಮಗಳಂತೆ ಕಂಗೊಳಿಸುತ್ತೆ...
 
 
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ  ನಾಚಿ ಕೆಂಪಾಯಿತೋ...
ಹೂಮಳೆ ಹೂಮಳೆ
ಒಲವಿನ ಹೊಸಮಳೆ..
 
ಹಾಡಿನ ಬಗ್ಗೆ ಬರೆಯುವುದೋ ಹಾಡನ್ನೇ ಬರೆಯುವುದೋ ನೀವೇ ಹೇಳಿ, ಯಾಕಂದರೆ ಹಾಡಿನ ಯಾವ ಸಾಲನ್ನು ಬಿಟ್ಟರು ಮನಸು ನಿಲ್ಲೋಲ್ಲ,ಸಾಹಿತ್ಯದ ಸಾಲುಗಳಿಗೆ ಮಾರು ಹೋಗಿದ್ದೇನೆ... ಗದ್ಯಗಳಿಗಿಂತ ಪದ್ಯಗಳು ಹಿಡಿಸ್ತಾವೇ ನನಗೆ, ಪುಟಗಟ್ಟಲೆ ಹೇಳುವ ಎಲ್ಲಾ ವಿಷಯ ಕೇವಲ ಹತ್ತಾರು ಸಾಲುಗಳಲ್ಲಿ ನಮ್ಮನ್ನು ತಲುಪುತ್ತೆ, ಬಾಯಲ್ಲಿ ಹಾಡಗುತ್ತವೆ , ಕಿವಿಯಲ್ಲಿ ಗುನುಗುತ್ತವೆ....
ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರಗಳ ಮೇಲಿನ ಅಭಿಮಾನ ಈ ಹಾಡಿನಿಂದ ಇನ್ನಷ್ಟು ಹೆಚ್ಚಾಗಿದೆ... ಈ ಲೇಖನದ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನ ಹೇಳಲು ಮರೆಯುವುದಿಲ್ಲ ನಾನು...ಧನ್ಯವಾದಗಳು ಸರ್..

Please Login to View/Add comments

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ